National Games 2025: ಹಾಕಿಯಲ್ಲಿ ಚಿನ್ನ ಗೆದ್ದ ಕರ್ನಾಟಕ!

ಪಂದ್ಯ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶ ಪರ ಫರಾಜ್ ಖಾನ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ತಂದುಕೊಟ್ಟರು.


ಹರಿದ್ವಾರ: ಕರ್ನಾಟಕ ಹಾಕಿ ತಂಡ ಗುರುವಾರ ನಡೆದ ಪುರುಷರ ವಿಭಾಗದ ಫೈನಲ್ ನಲ್ಲಿ ಉತ್ತರ ಪ್ರದೇಶದ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಪಂದ್ಯ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶ ಪರ ಫರಾಜ್ ಖಾನ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ತಂದುಕೊಟ್ಟರು. ಎಂಟನೇ ನಿಮಿಷದಲ್ಲಿ ಕರ್ನಾಟಕದ ಶಮಂತ್ ಸಿ ಗೋಲು ಗಳಿಸುವುದರೊಂದಿಗೆ ಪಂದ್ಯ 1-1 ಸಮಬಲ ಸಾಧಿಸಿತು.

ಬಳಿಕ ಭರತ್ ಮಹಾಲಿಂಗಪ್ಪ ಕುರ್ತಕೋಟಿ (18ನೇ ನಿಮಿಷ) ಮತ್ತು ಅಭರಣ ಸುದೇವ್ (39ನೇ ನಿಮಿಷ) ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಗಳಿಸಿ ಕರ್ನಾಟಕಕ್ಕೆ ಎರಡು ಗೋಲು ತಂದುಕೊಟ್ಟರು.