ಛಾವಾ" – ಭಾವನಾತ್ಮಕ, ತಾಂತ್ರಿಕ ಮತ್ತು ಐತಿಹಾಸಿಕ ಮಹಾಕಾವ್ಯ ! ₹200 ಕೋಟಿ ಗಡಿಗೆ ಬಂದಿರುವ ಈ ಚಿತ್ರ

ಛಾವಾ" ಕೇವಲ ಒಂದು ಚಲನಚಿತ್ರವಲ್ಲ, ಅದು ಛತ್ರಪತಿ ಸಂಭಾಜಿ ಮಹಾರಾಜರ ಧೈರ್ಯ, ತಪಸ್ಸು, ಮತ್ತು ಸ್ವಾತಂತ್ರ್ಯಯಾನವನ್ನು ತೆರೆ ಮೇಲೆ ಜೀವಂತಗೊಳಿಸುವ ಒಂದು ಮಹಾಕಾವ್ಯ. ಶಿವಾಜಿ ಮಹಾರಾಜರ ನಿಧನದ ಬಳಿಕ, ಮುಘಲ್ ಸಾಮ್ರಾಜ್ಯ ಸಂಭಾಜಿ ಮಹಾರಾಜರನ್ನು ದಮನಿಸಬಹುದು ಎಂಬ ದರ್ಪದಲ್ಲಿತ್ತು. ಆದರೆ ಅವರು ಔರಂಗಜೇಬನ ವಿರುದ್ಧ ಸವಾಲೆಸೆದು, ಮುಂಬರುವ ಪೀಳಿಗೆಗೆ ಸ್ವರಾಜ್ಯದ ಕನಸು ಮೂಡಿಸುವ ಅಜರಾಮರ ಯೋಧನಾಗಿ ಹೊರಹೊಮ್ಮಿದರು. ಈ ಚಿತ್ರ, ಕೇವಲ ಇತಿಹಾಸದ ಪುಟಗಳನ್ನು ಪುನರುಜ್ಜಿವನಗೊಳಿಸುವ ಪ್ರಯತ್ನವಲ್ಲ, ಒಂದು ತ್ಯಾಗಮಯ ನಾಯಕನ ಸಂಕಟ, ಸಾಹಸ, ಮತ್ತು ವೀರಗಾಥೆಯ ಪ್ರತಿಬಿಂಬ.


ಛಾವಾ" ಚಿತ್ರವನ್ನು ನಿರ್ದೇಶಿಸಿದ ಲಕ್ಷ್ಮಣ್ ಉತ್ತೇಕರ್ ಅವರು, ಭಾವನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮಪಾತವಾಗಿ ಜೋಡಿಸುವ ತಂತ್ರಜ್ಞ ತಂತ್ರಜ್ಞ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನ ಶೈಲಿ ಪ್ರತಿ ಕಥಾನಾಯಕನೊಬ್ಬನ ಭಾವನೆಗಳನ್ನು ಪ್ರೇಕ್ಷಕರ ಹೃದಯಕ್ಕೆ ತಲುಪಿಸುವ ರೀತಿಯಲ್ಲಿದೆ.

ವಿಕಿ ಕೌಶಲ್ ಅವರು ಸಂಭಾಜಿ ಮಹಾರಾಜರ ಪಾತ್ರಕ್ಕೆ ಪ್ರಾಣ ತುಂಬಿದ್ದಾರೆ. ಅವರ ಕಣ್ಣುಗಳಲ್ಲಿಯೇ ರಾಜನ ನೋವು, ಕೋಪ, ಪ್ರಜೆಯ ಮೇಲಿನ ಪ್ರೀತಿ ಮತ್ತು ಸ್ವಾತಂತ್ರ್ಯದ ಆಸೆ ಹರಿದು ಬರುತ್ತದೆ. ಯಶುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಮುಟ್ಟುತ್ತಾರೆ. ಅವರ ಕಣ್ಣೀರಿನಲ್ಲಿ ತಾಯಿಯ ದುಃಖ, ರಾಜಮಾತೆಯ ಧೈರ್ಯ, ಮತ್ತು ಪತ್ನಿಯ ತಪಸ್ಸು all in one. ಅಕ್ಷಯ್ ಖನ್ನಾ ಅವರೆ ಔರಂಗಜೇಬ್ ತೀವ್ರತೆಯಿಂದ ಭೀತಿಯನ್ನು ಮೂಡಿಸುವಂತಿದ್ದು, ಅವರ ವ್ಯಕ್ತಿತ್ವ ಚಿತ್ರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಚಿತ್ರವು IMAX ಮತ್ತು 4K ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರೀಕರಿಸಲಾಗಿದ್ದು, ಯುದ್ಧದ ಭಯಾನಕತೆಯನ್ನು ವಿಸ್ತ್ರತ ವೃತ್ತಿಚಿತ್ರದಂತೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಾಹಸ ದೃಶ್ಯ, ಪ್ರತಿ ಕತ್ತಿಯ ಹೊಡೆತ ಪ್ರೇಕ್ಷಕರಿಗೆ ನೇರವಾಗಿ ತಟ್ಟುವಂತೆ ತಯಾರಿಸಲಾಗಿದೆ.

ಸಂಭಾಜಿ ಮಹಾರಾಜರ ಕಾಲದ ರಾಜಮನೆತನ, ರಾಜಮಾರುಕಟ್ಟೆ, ಕಿಲ್ಲಾ (ಕೋಟೆ), ಯುದ್ದVisual Effects (VFX) 2 Computer Generated Imagery (CGI) ತಂತ್ರಜ್ಞಾನದ ಸಹಾಯದಿಂದ ನವೀಕರಿಸಲಾಗಿದೆ. ವಿಶೇಷವಾಗಿ, ಬುರಹಾನ್‌ಪುರದ ದಾಳಿಯ ದೃಶ್ಯದಲ್ಲಿ 3D ಮ್ಯಾಪಿಂಗ್ ತಂತ್ರವನ್ನು ಬಳಸಿಕೊಂಡು ಸೆಟ್ಟಿಂಗ್ ಅನ್ನು ವೈಶಿಷ್ಟ್ಯಗೊಳಿಸಲಾಗಿದೆ.

ಆಧುನಿಕ ಡೋನ್ ಕ್ಯಾಮೆರಾ ಚಿತ್ರೀಕರಣ, Steadicam shots, 2 slow-motion battle sequences ಚಿತ್ರಕ್ಕೆ ವಿಭಿನ್ನ ವೀಕ್ಷಣೀಯ ಅನುಭವವನ್ನು ನೀಡುತ್ತಸಂಭಾಜಿಯವರ ಕೊನೆಯ ದಿನಗಳಲ್ಲಿ ನಡೆದ ಘೋರ & deep-focus cinematography 2 high-contrast lighting wơ 2 ನಾಟಕೀಯವಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಲಾಗಿದೆ. ಇದು ಪ್ರೇಕ್ಷಕರಲ್ಲಿ ಭಾವನಾತ್ಮಕ ಆಘಾತವನ್ನು ಹುಟ್ಟಿಸುತ್ತದೆ.

ಈ ಚಿತ್ರವು ಕೇವಲ ಹೃದಯಸ್ಪರ್ಶಿ ಕಥೆ ಹೇಳುವುದಲ್ಲ, ಅದು ಪ್ರೇಕ್ಷಕರನ್ನು ಸಂಭಾಜಿಯವರ ಯುಗಕ್ಕೆ ಕೊಂಡೊಯ್ಯುವಂತೆ ಮಾಡಿ, ಅವರ ದುಃಖ, ಅವರ ಹೋರಾಟ, ಮತ್ತು ಅವರ ಬಲಿದಾನದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.