ಸುನೀತಾ ವಿಲಿಯಮ್ಸ್ ಗೆ ಶುಭ ಕೋರಿ ಪ್ರಧಾನಿ ಮೋದಿ ಪತ್ರ: ಭಾರತ ಭೇಟಿಗೆ ಆಹ್ವಾನ!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಲ್ಕು ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಸ್ಪೇಸ್‌ಎಕ್ಸ್ ಕ್ರ್ಯೂ-9 'ಡ್ರ್ಯಾಗನ್ ಫ್ರೀಡಮ್' ಬಾಹ್ಯಾಕಾಶ ನೌಕೆಯ ನೇರ ಪ್ರಸಾರವನ್ನು ನಾಸಾ ಒದಗಿಸುತ್ತಿದೆ.

ನವದೆಹಲಿ: ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ 'ಬುಚ್' ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS)ದಿಂದ ನಿರ್ಗಮಿಸಿದ್ದು, ಇಂದು ಸಂಜೆ ಭೂಮಿಗೆ ಬಂದಿಳಿಯಲಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಲ್ಕು ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಸ್ಪೇಸ್‌ಎಕ್ಸ್ ಕ್ರ್ಯೂ-9 'ಡ್ರ್ಯಾಗನ್ ಫ್ರೀಡಮ್' ಬಾಹ್ಯಾಕಾಶ ನೌಕೆಯ ನೇರ ಪ್ರಸಾರವನ್ನು ನಾಸಾ ಒದಗಿಸುತ್ತಿದೆ.

288 ದಿನಗಳ ಬಳಿಕ ಭೂಮಿಗೆ ವಾಪಸ್ಸಾಗುತ್ತಿರುವ ಭಾರತೀಯ ಮೂಲದ ವಿಲಿಯಮ್ಸ್ ಮತ್ತು ವಿಲ್ಮೋರ್ ಜೊತೆಗೆ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಇದ್ದಾರೆ.

ಭೂಮಿಗೆ ವಾಪಸ್ಸಾಗುತ್ತಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದು, ಅವರನ್ನು ಭಾರತ ಭೇಟಿಗೆ ಆಹ್ವಾನಿಸಿದ್ದಾರೆ.

ಸುನೀತಾ ವಿಲಿಯಮ್ಸ್ ಸುರಕ್ಷಿತ ವಾಪಸಾತಿಗಾಗಿ ಇಡೀ ವಿಶ್ವವೇ ಉಸಿರು ಬಿಗಿಹಿಡಿದು ಕಾಯುತ್ತಿರುವಾಗ ನರೇಂದ್ರ ಮೋದಿ ಭಾರತ ಮೂಲದ ವಿಲಿಯಮ್ಸ್ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನೀವು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿಎಂದು ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಮೂಲಕ ಕೆಲ ದಿನಗಳ ಹಿಂದೆ ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಸ್ಸಿಮಿನೊ ಅವರನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ ಈ ಪತ್ರ ಆಕೆಯನ್ನು ತಲುಪಬೇಕು ಎಂದು ಮನವಿ ಮಾಡಿದ್ದರು.