WPL 2025: ಕೊನೆಯ ಪಂದ್ಯ ಗೆದ್ದು ಟೂರ್ನಿಯಿಂದ ಹೊರಬಿದ್ದ RCB; ಮುಂಬೈ ಫೈನಲ್ ನೇರ ಪ್ರವೇಶವನ್ನು ತಡೆದ ಸ್ಮೃತಿ ಪಡೆ!
ಬೆಂಗಳೂರು: ದೆಹಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ವರ್ಷ ಮಹಿಳಾ ಪ್ರೀಮಿಯರ್ ಲೀಗ್ (WPL 2025) ನ ನೇರ ಫೈನಲ್‌ಗೆ ಪ್ರವೇಶಿಸಿದೆ. ಬ್ರಬೋರ್ನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) 11 ರನ್‌ನಿಂದ ಸೋತರು ಎಲಿಮಿನೇಟರ್ ಹಂತಕ್ಕೆ ಎಂಟ್ರಿ ಕೊಟ್ಟಿದ್ದರೆ ಆರ್ ಸಿಬಿ ತಂಡ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ಪಂದ್ಯದಲ್ಲಿ ಆರ್ ಸಿಬಿ 199 ರನ್ ಪೇರಿಸಿದ್ದು ಮುಂಬೈ ತಂಡವನ್ನು 188 ರನ್ ಗಳಿಗೆ ಆಲೌಟ್ ಮಾಡಿತು.
ಇನ್ನು ಈ ಗೆಲುವಿನೊಂದಿಗೆ, ಆರ್‌ಸಿಬಿ ಟೂರ್ನಮೆಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನ ಪಡೆಯದಂತೆ ನೋಡಿಕೊಂಡಿದೆ. ಸ್ಮೃತಿ ಮಂಧಾನ ನೇತೃತ್ವದ ತಂಡವು 6 ತಂಡಗಳ ಟೂರ್ನಿಯಲ್ಲಿ 8 ಪಂದ್ಯಗಳಿಂದ 6 ಅಂಕಗಳನ್ನು ಗಳಿಸುವ ಮೂಲಕ 5ನೇ ಸ್ಥಾನ ಗಳಿಸಿತು. ಮಂಗಳವಾರದ ಪಂದ್ಯದ ಫಲಿತಾಂಶದಂತೆ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ ಜೈಂಟ್ಸ್ ಮೂರನೇ ಸ್ಥಾನದಲ್ಲಿದ್ದು ಈ ಋತುವಿನ ಎಲಿಮಿನೇಟರ್‌ನಲ್ಲಿ ಈ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.
0 Comments