ಬಿಸಿಲಿನ ತಾಪಕ್ಕೆ ಬಸವಳಿದ ಜನ! ಅತಿಸಾರ,ಹೀಟ್ ಸ್ಟೋಕ್ ಆಗುವ ಸಾಧ್ಯತೆ. ಧಗೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ

ಈ ಚಳಿಗಾಳ ಇರುವಾಗಲೇ ಬೇಸಿಗೆ ಆರಂಭವಾಗಿದ್ದರ ಅನುಭವ ಜನರನ್ನು ಕಾಡುತ್ತಿದೆ. ಬಿಸಿಲಿನ ನೇರಳಾತೀತ ಕಿರಣಗಳು ನಮ್ಮ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸತ್ಯ ಬಿಸಿಲಿನ ತಾಪಮಾನ ತಟ್ಟುತ್ತಿದ್ದರಿಂದ ದೇಹಾಲಸ್ಯ ಜಾಸ್ತಿಯಾಗುತ್ತದೆ. ಹಾಗಂತ ಉದಾಸೀನತೆ ಅಥವಾ ಮೈಗಳ್ಳತನ ಮಾಡಬಾರದು ಬಿಸಲಿನ ಧಗೆಯಿಂದ ಸುಸ್ತು ಆಯಾಸ ನಿಶ್ಯಕ್ತಿ ಅತಿಯಾದ ಬಿಸಿಲಿನಿಂದ ಅತಿಸಾರ ಸಮಸ್ಯೆ ಕೂಡೆ ಉಂಟಾಗಬಹುದು.


ಬಾಗಲಕೋಟೆ ಜಿಲ್ಲೆಯೂ ಅಕ್ಷರಶ: ತಾಪಮಾನದಿಂದ

ಕೆಂಡವಾಗಿದೆ. ಜನರ ಆರೋಗ್ಯದ ಮೇಲೆ ಕೇಟ್ಟ ಪರಿಣಾಮ ಬೀರುತ್ತಿದೆ. ಬೆಳಗ್ಗೆ 7 ಗಂಟೆಯಷ್ಟೊತ್ತಿಗೆ ಬಿಸಿಲಿನ ಪ್ರಕೋಪ ಶುರುವಾಗುತ್ತಿದ್ದು 10 ಗಂಟೆಯಷ್ಟೊತ್ತಿಗೆ ಭೂಮಿ ಬಿಸಿಲಿನಿಂದ ಸುಡುತ್ತಿದೆ. ಜನರು ಮನೆಯಿಂದ ಹೊರಬರದಂತೆ ಕಟ್ಟಿಹಾಕುತ್ತಿದ್ದು, ಬಿಸಿಲಿನಲ್ಲಿ ಜನರು ಮಕ್ಕಳ ಓಡಾಟದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ವೃದ್ದರು ಮತ್ತು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪೆರಿಣಾಮ ಬೀರುತ್ತಿದ್ದು, ಜಳದ ಹೊಡೆತದಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ಜನರು ಆಸ್ಪತ್ರೆಗೆ ಸೇರುತ್ತಿದ್ದಾರೆ. ಜಿಲ್ಲೆಯೆಲ್ಲಿರುವ ಜನರು ಕೂಲಿ ನಂಬಿಕೊಂಡೆ ಬದಕು ಸಾಗಿಸುತ್ತಿರುವುದಲ್ಲದೇ ಶೇ.65% ಜನರ ಗುಡಿಸಲು ಮತ್ತು ಪತ್ರಾಸ ಮನೆಯಲ್ಲಿ ವಾಸವಾಗಿದ್ದು, ಉರಿ ಬೆಸಿಲಿನ ತಾಪಕ್ಕೆ ಮನುಷ್ಯನ ದೇಹದಲ್ಲಿ ಶಾಖ ಏರಿಕೆಯಾಗಿ ನೀರಿನಂಶ ಕಡಿಮೆಯಾಗುತ್ತದೆ.

ಕೆಲಸ ಮಾಡುವಾಗ ನಿಶ್ಯಕ್ತಿ ಬಳಲಿಕೆಯ ಅನುಭವವಾಗುತ್ತಲೇ ಇರುತ್ತದೆ ಮತ್ತು ಸುಸ್ತು ಆಯಾಸ ಆಗುವುದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹೆಚ್ಚಾಗಿ ಕಣ್ಣು ಉರಿ, ಚರ್ಮ ಕಪ್ಪಾಗುವುದು, ಅಸಿಡಿಟಿ ಸಮಸ್ಯೆ, ಜ್ವರ ನೆಗಡಿ, ಕೆಮ್ಮು, ವಾಂತಿ, ಬೇದಿ ಮತ್ತು ಯುರಿನ್ ಮಾಡುವಾಗ ನೋವು ಇಂತಹ ಸಮಸ್ಯೆಗಳಿಂದ ಹೆಚ್ಚಾಗಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ವೈದ್ಯರ ಸಲಹೆ:

ಸುಡು ಬಿಸಿಲಿನಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ನಿತ್ಯ 5 ರಿಂದ 6 ಲೀಟರ್ ನೀರು ಅಗತ್ಯವಿರುತ್ತದೆ. ಹಾಗಾಗಿ ಆಗಾಗ ನೀರು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಶಾಖಾಹಾರಿ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು ಮಾಂಸಹಾರಿ ಊಟ ಸೇವಿಸುವುದು ಈಗ ಉತ್ತಮವಲ್ಲ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು.

ಎಳನೀರಿಗೆ ದೇಹವನ್ನು ಸಮತೋಲನದಲ್ಲಿಡುವ ಶಕ್ತಿ ಇರುವದರಿಂದ ದಿನನಿತ್ಯವಲ್ಲದಿದ್ದರೂ ವಾರಕ್ಕೆ ನಾಲ್ಕು ಬಾರಿ ಕುಡಿಯಬೇಕು ಮತ್ತು ಸೇಬು, ಕಿತ್ತಳೆ, ಕಲ್ಲಂಗಡಿ, ಕಿವಿ ಹಣ್ಣು, ಕರ್ಬೂಜಾ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯ ಕಾಪಾಡಲು ಸಾಧ್ಯ. ಎಂದು ಡಾ. ಗೈಬುಸಾಬ ಗಲಗಲಿ ಹೇಳಿದರು.