ಇಪ್ಪತ್ತು ವರ್ಷಗಳಿಂದ ಉಪವಿಭಾಗಾಧಿಕಾರಿಗಳ ವಸತಿ ಗೃಹ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.

ಸುದ್ದಿಮಿತ್ರ :

ಜಮಖಂಡಿ ನಗರದ ಮಿನಿ ವಿಧಾನ ಸೌದ ಸಮಿಪದಲ್ಲಿರುವ ಕಂದಾಯ ಇಲಾಖೆಯ ಉಪವಿಭಾಗಧಿಕಾರಿಗಳ ಸರ್ಕಾರಿ ವಸತಿ ಗೃಹ ಪಾಳು ಬಿದ್ದಿದ್ದು 20 ವರ್ಷಗಳಿಂದ ಕುಡಕರ ಮತ್ತು ಅನೈತಿಕ ಚಟವಟಿಕೆಯ ಕೇಂದ್ರವಾಗಿದೆ.


ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ ಸದ್ಯ ವಾಸಿಸುವ ಗೃಹ ಇಳಿಜಾರು ಪ್ರದೇಶದಲ್ಲಿ ಇರುವುದರಿಂದ ಮಳೆಗಾಳದಲ್ಲಿ ನಗರದ ಎಲ್ಲ ಚರಂಡಿಗಳು ಭರ್ತಿಯಾಗಿ ಚರಂಡಿ ನೀರು ಮನೆ ಅಂಗಳಕ್ಕೆ ಬರುತ್ತಿದ್ದ ಕಾರಣ ಈ ಹಿಂದೆ ಇದ್ದ ಉಪವಿಭಾಗಧಿಕಾರಿ ಅವರು 2005ರಲ್ಲಿ ಸರ್ಕಾರಿ ಗೃಹ ಕಟ್ಟಡಕ್ಕೆ ಎನ್‌ ಆಗಿರುವ ಖಾಸಗಿ ನಿವೇಶನವನ್ನು ಅಚ್ಚುಕಟ್ಟಿದಾದ ಪ್ರದೇಶದಲ್ಲಿ ಖರೀದಿಸಿ ಸರ್ಕಾದಿಂದ ಮಂಜೂರಾತಿ ಪಡೆದು ಸುಮಾರು ಅಂದಾಜು 25ಲಕ್ಷ ರೂ.ದಲ್ಲಿ ನಿರ್ಮಿತಿ ಕೇಂದ್ರದವರಿಗೆ ಕಟ್ಟಡ ಕಾಮಗಾರಿ ನೀಡಿದ್ದು ಬರದಿಂದ ಕಟ್ಟಡ ಸಾಗಿ ಒಂದೇ ವರ್ಷದಲ್ಲೇ ಮೇಲ್ಬಾವಣಿ ಹಾಕಿ 2006ರಲ್ಲಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.

ಕಟ್ಟಡದ ಸುತ್ತಮುತ್ತ ಇರುವ ಖುಲ್ಲಾ ಜಾಗದಲ್ಲಿ ವ್ಯಾಪಕ ಗಿಡಗಂಟೆಗಳ ಪೊದೆಗಳು ಬೆಳೆದಿವೆ. ಕಳೆದ 20 ವರ್ಷಗಳಿಂದ ಈ ಕಟ್ಟಡ ಕುಡುಕರಿಗೆ ಜೂಜುಕೋರರಿಗೆ ಆನೈತಿಕ ಚಟವಟಿಕೆ ನಡೆಸುವವರ ತಾಣವಾಗಿ ಪರಿವರ್ತನೆಗೊಂಡಿದೆ.

ಸ್ಥಳಿಯರ ಮಾಹಿತಿಯ ಪ್ರಕಾರ ದಿನದ 24 ಗಂಟೆನೂ ಆಕ್ರಮ ಚಟುವಟಿಕೆ ನಡೆಸುವು ಯೋಗ್ಯ ಸ್ಥಳವಾಗಿ ಮಾರ್ಪಟ್ಟಿದ್ದು ನಮಗೆ ಇಂತಹ ವಾತಾವರಣದಲ್ಲಿ ವಾಸಿಸಲು ನಿತ್ಯ ಹಿಂಸೆ ಆಗುತ್ತಿದೆ ಎಂದು ಅಕ್ಕಪಕ್ಕದ ಜನರು ತಮ್ಮ ಅಳಲು ತೋಡಿಕೊಂಡರು.

20 ವರ್ಷದಲ್ಲಿ ಸುಮಾರು 24ಕ್ಕೂ ಹೆಚ್ಚು ಉಪವಿಭಾಗಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ ಇದರಲ್ಲಿ 5 ಜನ ಐಎಎಸ್ ಅಧಿಕಾರಿಗಳಾಗಿದ್ದು ಈ ನಿರುಪಯುಕ್ತವಾದ ಕಟ್ಟಡದ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಜಾಣ ಕುರುಡತನ ತೋರಿರುವುದು ಸಂಶಯಕ್ಕೆ ಎಡೆಯಾಗಿದೆ.

ಈ ಕಟ್ಟಡಕ್ಕೆ ಯಾವುದೇ ದಾಖಲೆಗಳಿಲ್ಲ ಈ ಕಟ್ಟಡದ ಬಗ್ಗೆ ಒಂದು ವಾರದಿಂದ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ವಿಚಾರಿಸಿದ್ದರೆ ಕೆಲ ಅಧಿಕಾರಿಗಳು ವಸತಿ ಗೃಹದ ಬಗ್ಗೆ ಮಾಹಿತಿನೇ ಇಲ್ಲ, ಒಬ್ಬರ ಮೇಲೆ ಒಬ್ಬರಂತೆ ಹಾರೈಕೆ ಉತ್ತರ ನೀಡುತ್ತಿದ್ದಾರೆ.

2006ರಲ್ಲಿ ಕಾಮಗಾರಿ ಸ್ಥಗಿತವಾಗಿದೆ ಯಾಕೆ ಎಂದು ಗೊತ್ತಿಲ್ಲ ಕಟ್ಟಡದ ಕಾಮಗಾರಿ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ಸಂಬಂಧಿಸದ ದಾಖಲೆಗಳು ಬಗ್ಗೆ ಸಂಭಂದಿಸಿದ ಅಧಿಕಾರಿಗಳನ್ನು ಕೇಳಿದರೂ ಸಿಗುತ್ತಿಲ್ಲ.

ಇಂತಹ ಸರ್ಕಾರಿ ಕಟ್ಟಡಗಳ ಬಗ್ಗೆ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಪಾಳು ಬಿದ್ದು ಶಿಥಿಲಗೊಂಡಿರುವ ಕಟ್ಟಡವನ್ನು ಪೂರ್ಣಗೊಳಿಸಿ ಉಪಯೋಗಿಸುವ. ಕಾರ್ಯವಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.