ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ಸುದ್ದಿ ಮಿತ್ರ:
ಜಮಖಂಡಿ:ರಾಜ್ಯಸರ್ಕಾರ ಆರ್ಥಿಕ ಹೊರೆಯ ನೆಪ ಮಾಡಿಕೊಂಡು ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವದನ್ನು ಖಂಡಿಸಿ ನಗರದ ದೇಸಾಯಿ ವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು, ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯಸರ್ಕಾರ ವಿವಿಗಳನ್ನು ಅಭಿವೃದ್ಧಿ ಪಡಿಸಬೇಕು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು, ಅದನ್ನು ಬಿಟ್ಟು ವಿವಿಗಳನ್ನು ಮುಚ್ಚಲು ಹೊರಟಿರುವದು ಸರ್ಕಾರದ ಶಿಕ್ಷಣ ವಿರೋಧಿ ನೀತಿಯಾಗಿದೆ.ಶಿಕ್ಷಣಕ್ಕೆ ಸಂಬಂಧ ಪಟ್ಟ ನಿರ್ಣಯಗಳನ್ನು ಕೈಗೊಳ್ಳುವಾಗೆ ಸರ್ಕಾರ ಶಿಕ್ಷಣ ತಜ್ಞರ ಸಲಹೆ ಪಡೆಯಬೇಕು ಅದರ ಬದಲು ರಾಜಕೀಯ ಕೇಂದ್ರಿತ ನಿರ್ಧಾರಗಳನ್ನು ತೆಗೆದು ಕೊಳ್ಳಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು. 10 ಸಾವಿರ ವಿದ್ಯಾರ್ಥಿಗಳಿಗೊಂದು ವಿವಿ ಇರಬೇಕು ಅದನ್ನು ಹೋಲಿಕೆ ಮಾಡಿದರೆ ಇಲ್ಲಿರುವ ವಿವಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂಥಹ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿರುವ ವಿದ್ಯಾಲಯಗಳನ್ನು ಮುಚ್ಚುವದು ಖಂಡನೀಯ ವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದರು. ಎಬಿವಿಪಿಯ ದರ್ಶನ ಆಲಗೂರ, ಪುಂಡಲೀಕ ಪೂಜಾರಿ, ಪರಶುರಾಮ ಜಿಟ್ಟಿ, ಶೀತಲ ಆಲಗೂರ, ಚೆನ್ನಪ್ಪ ಪೂಜಾರಿ, ದರೆಪ್ಪ ಬಾಳೂರ, ಹಣಮಂತ ಹುದ್ದಾರ, ಸಾಗರ ಸದಲಗಿ, ಸನತ್ ಮೈಗೂರ, ವಿದ್ಯಾರ್ಥಿನಿಯರಾದ ಸೌಂದರ್ಯ ಜಕಾತಿ, ಶಿಲ್ಪಾ ಭಜಂತ್ರಿ, ಗೀತಾ ತೇಲಿ, ಕಾವ್ಯಾ ಶಿರಬೂರ ಸೇರಿದಂತೆ ಹಲವರಿದ್ದರು. ಉಪತಹಸೀಲ್ದಾರ ಬಸವರಾಜ ಸಿಂಧೂರ ಅವರಿಗೆ ಮನವಿ ಸಲ್ಲಿಸಿದರು.
0 Comments