ಏಪ್ರಿಲ್ ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ: ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ; SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ!

2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ಮಾಡಿದೆ.

ನವದೆಹಲಿ: ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತಂದಿದ್ದು, ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ, SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.

ಹೌದು.. 2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ಮಾಡಿದೆ. ಎಟಿಎಂ ಹಣ ವಿತ್ ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ ಶುಲ್ಕ ಹೆಚ್ಚಳ, ಸೇರಿದಂತೆ ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳವರೆಗೆ ಬದಲಾವಣೆಗಳಾಗುತ್ತಿವೆ.

ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಮೇ 1, 2025 ರಿಂದ ಜಾರಿಗೆ ಬರುವಂತೆ ನಗದು ಹಿಂಪಡೆಯುವಿಕೆಗಾಗಿ ATM ಇಂಟರ್‌ಚೇಂಜ್ ಅನ್ನು 17 ರೂ.ಗಳಿಂದ 19 ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಿವೆ.

ದೇಶೀಯ ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಅನ್ನು ಪರಿಷ್ಕರಿಸಲಾಗಿದೆ. ಮಾರ್ಚ್ 13 ರ NPCI ಸುತ್ತೋಲೆಯ ಪ್ರಕಾರ, ಹಣಕಾಸುಯೇತರ ವಹಿವಾಟುಗಳು 7 ರೂ.ಗಳ ಇಂಟರ್‌ಚೇಂಜ್‌ಗೆ ಒಳಪಟ್ಟಿರುತ್ತವೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್, ರಾಷ್ಟ್ರೀಯ ಹಣಕಾಸು ಸ್ವಿಚ್ (NFS) ATM ನೆಟ್‌ವರ್ಕ್‌ನ ಸದಸ್ಯರಿಗೆ ಕಳುಹಿಸಲಾದ ಪತ್ರವನ್ನು ಪರಿಶೀಲಿಸಿದೆ. ಇಂಟರ್‌ಚೇಂಜ್ ದರದ ಮೇಲೆ ಪ್ರತ್ಯೇಕ GST ವಿಧಿಸಲಾಗುತ್ತದೆ.